Sign In With   
Carnatic Vocal Smarane Saalade Ondu Baari Smarane Saalade

Ondu Baari Smarane Saalade

Ondu Baari Smarane Saalade

Singers

 M.venkatesh Kumar

Composers

 Vasanth Kanakapur

Lyricist

 Sri Vadiraja Swamy

No of plays

 0

Song Duration

 0

Ratings

 
Lyrics of Ondu Baari Smarane Saalade by DayaPosted:2011-09-17 23:28:25
ಒಂದು ಬಾರಿ ಸ್ಮರಣೆ ಸಾಲದೇ
ಆನಂದ ತೀರ್ಥರ , ಪೂರ್ಣ ಪ್ರಜ್ಞರ
ಸರ್ವಜ್ಞರಾಯರ ಮಧ್ವರಾಯ.(ಒಂದು ಬಾರಿ)
1
ಹಿಂದನೇಕ ಜನ್ಮದಲ್ಲಿ
ನೊಂದು ಯೋನಿಯಲ್ಲಿ ಬಂದು
ಇಂದಿರೇಶನ ಪಾದವನ್ನು
ಹೊಂದಬೇಕೆಂಬುವರಿಗೆ.(ಒಂದು ಬಾರಿ)
2
ಆರುಮಂದಿ ವೈರಿಗಳನು
ಸೇರಲೀಸದಂತೆ ನೂಕಿ
ಧೀರನಾದ ಹರಿಯಪಾದ
ಸೇರಬೇಕೆಂಬುವರಿಗೆ.(ಒಂದು ಬಾರಿ)
3
ಪ್ರಕೃತಿ ಬಂಧದಲ್ಲಿ ಸಿಲುಕಿ
ಸಕಲ ವಿಷಯಗಳಲಿ ನೊಂದು
ಅಕಳಂಕ ಚರಿತ ಹರಿಯಪಾದ
ಭಕುತಿ ಬೇಕೆಂಬುವರಿಗೆ.(ಒಂದು ಬಾರಿ)
4
ಘೋರ ಸಂಸಾರಾಂಬುಧಿಗೆ
ಪರಮಜ್ಞಾನವೆಂಬ ವಾಡೆ
ಏರಿ ಮೆಲ್ಲನೆ ಹರಿಯ ಪಾದ
ಸೇರಬೇಕೆಂಬುವರಿಗೆ.(ಒಂದು ಬಾರಿ)
5
ಧೀನ ಬುದ್ದಿಯಿಂದ ಶ್ರೀ ಹಯವದನನ್ನು ಜರಿದು
ತಾನು ಬದುಕಲಾರದಿರಲು
ತೋರಿಕೊಟ್ಟ ಮಧ್ವ ಮುನಿಯ
ಒಂದುಬಾರಿ ಸ್ಮರಣೆ ಸಾಲದೆ.

(ಸೇರಿಸಿದ್ದು-ದಯಾನಂದ-17-09-2011ರಂದು)
Lyrics of Ondu Baari Smarane Saalade by DayaPosted:2011-09-17 23:28:25